ಮಡಿಕೇರಿ: ನಗರ ಸಭೆ ವ್ಯಾಪ್ತಿಯ ಮಹಾದೇವಪೇಟೆ ಯಲ್ಲಿರುವ ಮಾಂಸ ಮಾರುಕಟ್ಟೆ ಬಳಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ.

ಇಲ್ಲಿನ ಕೋಳಿ ಮಾರುಕಟ್ಟೆ ಬಳಿ 20ಕ್ಕೂ ಹೆಚ್ಚು ಬೀದಿ ನಾಯಿಗಳು ಇದ್ಧು ಮಾರುಕಟ್ಟೆಗೆ ಬರುವ ಸ್ಥಳೀಯರು ಹಾಗೂ ಈ ಭಾಗದ ಸಾರ್ವಜನಿಕರು ಭಯಭೀತಿ ಯಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೋಳಿ ಅಂಗಡಿಗಳನ್ನು ಮಳಿಗೆ ಮಾಡಲು ಹೊರಟಿರುವ ನಗರಸಭೆ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕಿದೆ.