ವಿರಾಜಪೇಟೆ: ತಾಲ್ಲೂಕಿನ ಸಿದ್ದಾಪುರ ಕಾವೇರಿ ಹೊಳೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬರನ್ನು ಸ್ಥಳೀಯರು ಗಮನಿಸಿ ರಕ್ಷಣೆ ಮಾಡಿದ್ದಾರೆ.
ಸುಂಟಿಕೊಪ್ಪದ ನಿವಾಸಿಯಾಗಿರುವ ಈಕೆ ಗೌರಮ್ಮ ಎಂದು ಗುರುತಿಸಲಾಗಿದ್ದು ಸಿದ್ದಾಪುರ ಪೊಲೀಸ್ ಠಾಣೆಗೆ ಸ್ಥಳೀಯರು ಹಸ್ತಾಂತರ ಮಾಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
