ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿ ಮೃತ ಪಟ್ಟ ಘಟನೆ ಸೋಮವಾರಪಟೆ ತಾಲೂಕು ಶನಿವಾರಸಂತೆ ಮಾಲಂಬಿ ಜೇನು ಕಲ್ಲು ಬೆಟ್ಟದ ಬದಿ ನಡೆದಿದೆ.
ಮಾಲಂಬಿ ಗ್ರಾಮದ ಅಯ್ಯಪ್ಪ (53) ಮೃತ ಪಟ್ಟ ವ್ಯಕ್ತಿ.
ಇದೆ ತಿಂಗಳ 15ನೇ ಶುಕ್ರವಾರ ಜೇನುಕಲ್ಲು ಬೆಟ್ಟಕ್ಕೆ ಕಣಿಲೇ ತರಲೆಂದು ತೆರಳಿದ ಸಂದರ್ಭದಲ್ಲಿ ಬೆಟ್ಟದ ಮೇಲಿಂದ ಕಾಲು ಜಾರಿ ಕೆಳಕ್ಕೆ ಬಿದ್ದು ಸ್ಥಳದಲ್ಲಿ ಮೃತ ಪಟ್ಟಿದ್ದಾರೆ.
ನಂತರ ಮನೆಯವರು ಗ್ರಾಮಸ್ಥರು ಹುಡುಕಾಟ ನಡೆಸಿದರು ಸಿಗಲಿಲ್ಲ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಿಸಿ ಕೊಂಡಿದ್ದರು.
ನಿನ್ನೆ ಮಂಗಳವಾರ ಸ್ಥಳೀಯರು ಕಾಡಿನತ್ತ ತೆರಳಿದಾಗ ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದ್ದು.
ಅಯ್ಯಪ್ಪ ಇವರ ಪತ್ನಿ ಸರೋಜ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ
