ಗೋಣಿಕೊಪ್ಪ ಕೇರಳ ರಾಜ್ಯ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಲೇಪರ್ಡ್ ಕ್ಯಾಟ್ (ಪೆರ್ಪಣ) ಅಪಘಾತಕೀಡಾಗಿ ಸಾವನಪ್ಪಿದ್ದು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ದಕ್ಷಿಣಕೊಡಗಿನ ಅದ್ರಲ್ಲೂ ವಿರಾಜಪೇಟೆ ಭಾಗದಲ್ಲಿ ಹುಲಿ ಚಲನವಲನ ಇರುವ ಬೆನ್ನಲ್ಲೇ ರಸ್ತೆ ಬದಿಯಲ್ಲಿ ಕಂಡು ಬಂದ ಈ ಸನ್ನಿವೇಶ ಹುಲಿ ಮರಿ ಎಂದು ಸುದ್ದಿ ಹಬ್ಬಿ ಆತಂಕ ಉಂಟಾಗಿತ್ತು, ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಧಿಕಾರಿಗಳು ಪರಿಶೀಲನೆ ನಡೆಸಿ ಇದೊಂದು ಲೇಪರ್ಡ್ ಕ್ಯಾಟ್ ಎಂದು ಸ್ಪಷ್ಟಪಡಿಸಿದ್ದು, ಮೃತ ಪಟ್ಟ ಪ್ರಾಣಿ ದೇಹವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.