ಭಾರಿ ಮಳೆಯಿಂದಾಗಿ ದುರಸ್ತಿಗಿಡಾಗಿದ್ದ ಸುಂಕದಕಟ್ಟೆಯಿಂದ ವಿರಾಜಪೇಟೆ ಮುಖ್ಯರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಎ.ಎಸ್ ಪೊನ್ನಣ್ಣ ನವರ ಸೂಚನೆಯಂತೆ ವಿರಾಜಪೇಟೆ ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ಮನೆಯಪಂಡ ದೇಚಮ್ಮ ಕಾಳಪ್ಪ ರವರ ನೇತೃತ್ವದಲ್ಲಿ ಕಾಮಗಾರಿಗೆ ಕಳೆದ ಕೆಲವು ದಿನಗಳ ಹಿಂದೆ ಚಾಲನೆ ನೀಡಲಾಗಿತ್ತು.
ಆದರೆ ಇದುವರೆಗೂ ಕೂಡ ಕಾಮಗಾರಿ ಆರಂಭಗೊಂಡಿಲ್ಲ. ಈ ಬಗ್ಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ದೇಚಮ್ಮ ರವರ ಗಮನ ಸೆಳೆದಾಗ ಪ್ರತಿಕರಿಸಿದ ಅಧ್ಯಕ್ಷರು
ಕಾಮಗಾರಿಗೆ ಚಾಲನೆ ನೀಡಿದ ಮರು ದಿನದಿಂದಲೇ ಚಂಡಮಾರುತದ ಪರಿಣಾಮವಾಗಿ ಮಳೆ ಆರಂಭವಾಯಿತು, ಇದರಿಂದ ಥಾರ್ ಘಟಕ ಸ್ಥಗಿತಗೊಂಡಿದ್ದರಿಂದ, ಹೆಚ್ಚಿನ ಬಿಸಿಲಿನ ಅವಶ್ಯಕತೆ ಇದ್ದುದರಿಂದ ಗುತ್ತಿಗೆದಾರರು ಕಾಮಗಾರಿ ಆರಂಭಿಸಿಲ್ಲ, ಇನ್ನು ನಾಲ್ಕು,,ಐದು ದಿನದಲ್ಲಿ ಕಾಮಗಾರಿ ಆರಂಭಗೊಂಡು ಗುಣಮಟ್ಟದ ರಸ್ತೆಯನ್ನು ನೀಡಲಾಗುವುದು ಎಂದು ದೇಚಮ್ಮ ಅವರು ಸ್ಪಷ್ಟಪಡಿಸಿದ್ದಾರೆ.