ರೈತರು ಸಿ ಅಂಡ್ ಡಿ ಲ್ಯಾಂಡ್ ಸೇರಿದಂತೆ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ
ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸರ್ಕಲ್ ನಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಅವೈಜ್ಞಾನಿಕ ಮಾಡಿರುವ ಸಿ ಅಂಡ್ ಡಿ ಸರ್ವೇ ಯನ್ನು ರದ್ದೂಗೊಳಿಸಿ ಮರು ಸರ್ವೆ ಮಾಡಿ ರೈತರ ಜಮೀನು ರೈತರ ಹೆಸರಿಗೆ ಮಂಜೂರು ಮಾಡಬೇಕು. ಯಾವುದೇ ಕಾರಣಕ್ಕೆ ಮಾಹಿತಿ ಇಲ್ಲದೆ ಮಾಡಿರುವ ಮೀಸಲು ಅರಣ್ಯ, ಸೆಕ್ಷನ್ 4/5 ಅನ್ನು ಕೈ ಬಿಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಸಿರು ಪೀಠಕ್ಕೆ ಒತ್ತಡ ಹಾಕಬೇಕು, ಕಸ್ತೂರಿ ರಂಗಣ್ಣ ವರದಿಯನ್ನು ಕೇರಳ ಮಾದರಿಯಲ್ಲಿ ಕೈಬಿಡಬೇಕು ಎಂದು ಒತ್ತಾಯಿಸಿದರು.