ನಗರದ ಪಿ.ಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ 112 ಸಹಾಯವಾಣಿಯ ಬಗ್ಗೆ ಅರಿವು ಕಾರ್ಯಕ್ರಮವು ಬುಧವಾರ ನಡೆಯಿತು.
ಪೊಲೀಸ್ ಇಲಾಖೆಯ ಮಕ್ಕಳ ಕಲ್ಯಾಣಾಧಿಕಾರಿ ಸುಮತಿ ಅವರು ಮಕ್ಕಳ ಸಹಾಯವಣಿ 112 ರ ಬಗ್ಗೆ ಮಾಹಿತಿ ನೀಡಿದರು.
ಯಾರೇ ಆದರೂ ಅಸಭ್ಯವಾಗಿ ನಡೆದುಕೊಂಡರೆ, ಮೊದಲಿಗೆ 112 ಅನ್ನು ಮೊಬೈಲ್‍ನಲ್ಲಿ ಡಯಲ್ ಮಾಡಿದ ನಂತರ 8ನೇ ನಂಬರ್ ಅಥವಾ ಸಂಖ್ಯೆಗೆ ಡಯಲ್ ಮಾಡಿ ಸಮಸ್ಯೆ ತಿಳಿಸಲು ಮನವರಿಕೆ ಮಾಡಿದರು.
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ರಂಗಧಾಮಪ್ಪ ಅವರು ಮಾತನಾಡಿ ಮಕ್ಕಳು ಅರಿತುಕೊಂಡಂತಹ ಮಾಹಿತಿಯನ್ನು ಹಾಗೂ ಶಾಲಾ ಉಪಹಾರ ಬಿಸಿಯೂಟ ಹಾಗೂ ಪಾಠಕ್ಕೆ ಸಂಬಂಧಿಸಿದಂತಹ ಸಮಸ್ಯೆಗಳ ವಿವರಗಳನ್ನು ಕೂಡ ನೀವು 112 ಸಹಾಯವಾಣಿಯ ಮೂಲಕ ತಿಳಿಸಬಹುದು ಎಂದರು.
ಮಡಿಕೇರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಮೋಹನ ಕುಮಾರಿ ಅವರು ಮಾತನಾಡಿ ಮಕ್ಕಳಿಗೆ ಅವಶ್ಯಕತೆ ಇದ್ದಲ್ಲಿ ಮಾತ್ರ ಕರೆ ಮಾಡಬಹುದು ಎಂದು ಮಾಹಿತಿ ನೀಡಿದರು.
ಮಕ್ಕಳ ಕಲ್ಯಾಣ ಇಲಾಖೆಯ ಜೋಸೆಫ್ ಅವರು ಮಾತನಾಡಿ 112 ಸಹಾಯವಾಣಿಯು ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ಹಾಗೂ ಸಮಸ್ಯೆಯನ್ನು ಬಗೆಹರಿಸಲು ಸಹಾಯಕವಾಗಿದೆ ಎಂದು ತಿಳಿಸಿದರು.
ಇಸಿಒ ಜಾನೆಟ್, ಸರ್ಕಾರಿ ಪ್ರೌಢ ಶಾಲೆಯ ಜಗದೀಶ್, ಎಸ್‍ಡಿಎಂಸಿ ಸದಸ್ಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಇತರರು ಇದ್ದರು. ಹಿರಿಯ ಮುಖ್ಯೋಪಾಧ್ಯಾನಿ ಸುಶೀಲ ಅವರು ಸ್ವಾಗತಿಸಿದರು. ವಂದಿಸಿದರು.