ಕೊಡಗಿನಲ್ಲಿ ವಲಸಿಗ ಅಸ್ಸಾಂ ಕಾರ್ಮಿಕರ ಪ್ರವೇಶದ ನಂತರ ಅಪರಾಧ ಪ್ರಕರಣಗಳು ಹೆಚ್ಚಾಗಿದೆ ಎನ್ನುವ ಆರೋಪ ಇರುವ ಬೆನ್ನಲ್ಲೇ, ನಾಪೋಕ್ಲು ಸಮೀಪದ ನರಿಯಂದಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಚೇಲಾವರ ಜಲಪಾತದ ಬಳಿಯ ವಿದ್ಯುತ್ ಬಳಸಿ ನದಿಯಿಂದ ಮೀನು ಬೇಟೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಇಲ್ಲಿನ ಬಾಳೆಕಾಡು ಎಸ್ಟೇಟ್ ಸಮೀಪ ಇರುವ ಹೊಳೆಯಲ್ಲಿ ಮೂವರು ಯುವಕರು ವಿದ್ಯುತ್ ವೈರ್ ಜೋಡಿಸಿ, ಮೀನು ಹಿಡಿಯುತ್ತಿರುವುದು ಗಮನಿಸಿ ಪ್ರಶ್ನಿಸಿದ್ದಾಗ, ಮೀನು ಬೇಟೆ ಮಾಡುತಿರುವುದಾಗಿ ತಿಳಿಸಿದ್ದಾರೆ. ಅಪಾಯಕಾರಿಯಾಗಿ ಮೀನು ಹಿಡಿಯುತ್ತಿರುವ ಈ ಕಾರ್ಮಿಕರ ವಿರುದ್ಧ ಸೂಕ್ತ ಕ್ರಮಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.