ಆಂಧ್ರಪ್ರದೇಶಕ್ಕೆ ರಾಜ್ಯದ ಕಾಡಾನೆಗಳನ್ನು ನೀಡುವ ವಿಚಾರದ ಬೆನ್ನಲ್ಲೇ ಮಾನವ ಹಾಗೂ ವನ್ಯ ಜೀವಿಗಳ ಸಂಘರ್ಷ ತಡೆಗೆ ಆಂಧ್ರ ಪದೇಶ ಸರ್ಕಾರ ಕರ್ನಾಟಕದ ಅರಣ್ಯ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡು ಅಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿಗೆ ತರಬೇತಿ ಕೊಡಿಸಿದೆ.
ಆಂದ್ರಪ್ರದೇಶದ ನಾಲ್ಕೈದು ಜಿಲ್ಲೆಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು ನಿಯಂತ್ರಣ ದುಸ್ಥರವಾಗಿದೆ ಎನ್ನಲಾಗಿದ್ದು .ಅಲ್ಲಿನ ಅರಣ್ಯ ಸಚಿವ ಪವನ್ ಕಲ್ಯಾಣ್ ಅವರ ಮನವಿಯ ಮೇರೆಗೆ ಕರ್ನಾಟಕದ ಅರಣ್ಯ ಇಲಾಖೆಯೊಂದಿಗೆ ಕೊಡಗಿನ ದುಬಾರೆಯಲ್ಲಿ ತರಬೇತಿ ನೀಡಲಾಗುತ್ತಿದೆ.ಆಂಧ್ರಪ್ರದೇಶದಿಂದ 20 ಕ್ಕೂ ಅಧಿಕ ಅರಣ್ಯ ಇಲಾಖೆ ಸಿಬ್ಬಂದಿಗೆ ಆನೆಗಳ ಪ್ರತಿಯೊಂದು ಚಲನವಲನ ಪಳಗಿಸುವುದು ಹೇಗೆ, ಆನೆಗಳ ಸ್ನಾನ, ಕಮಾಂಡ್,ಆನೆಗಳ ರೈಡ್, ಆನೆಗಳ ಆಹಾರ, ಹುಲಿ,ಆನೆಗಳ ಸೆರೆ ಹಿಡಿಯುವ ಹಗ್ಗವನ್ನು ತಯಾರಿ ಬಗ್ಗೆ ಪ್ರಾಯೋಗಿಕವಾಗಿ ದುಬಾರೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತರಬೇತಿ ನೀಡಿದ್ದಾರೆ.
ದುಬಾರೆ ಸಾಕಾನೆ ಶಿಬಿರದ ಸಾಧುವಾಗಿರುವ ಆನೆಗಳನ್ನು ಉಪಯೋಗಿಸಿಕೊಂಡು ಆಂಧ್ರ ಪ್ರದೇಶದ ಅರಣ್ಯ ಇಲಾಖೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಇಲ್ಲಿನ ಮಾವುತರು ಮತ್ತು ಕವಾಡಿಗರು ಜೊತೆಯಲ್ಲಿಯೇ ಇದ್ದು ಅವರಿಗೆ ಆನೆಗಳನ್ನು ಪಳಗಿಸುವ ಬಗ್ಗೆ ತರಬೇತಿ ನೀಡುತ್ತಿದ್ದಾರೆ.ಮುಖ್ಯವಾಗಿ ಆನೆಗಳ ಮೇಲೆ ಏರುವ ಬಗ್ಗೆ ಹೆಚ್ಚಿನ ತರಬೇತಿ ಕಳೆದ ಒಂದು ತಿಂಗಳಿನಿಂದ ನೀಡಲಾಗುತ್ತಿದೆ.