ಕುಶಾಲನಗರ ತಾಲೂಕು ಹೆಬ್ಬಾಲೆ ಗ್ರಾಮದಲ್ಲಿ ಪ್ರೀತಿಸಿ ಮದುವೆಯಾದ ನವವಿವಾಹಿತೆಯೊಬ್ಬಳು ಅನುಮಾನಾಸ್ಪದವಾಗಿ ಸಾವನಪ್ಪಿದ್ದಾಳೆ ,ಅಕ್ಷಿತಾ (೧೮) ಸಾವನಪ್ಪಿದ್ದ ಯುವತಿಯಾಗಿದ್ದು
ಪತಿ ಹೇಮಂತ್ ಹಾಗು ಮನೆಯವರು ಈ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಮೃತ ಅಕ್ಷತೆ ದಲಿತ ಸಮುದಾಯಕ್ಕೆ ಸೇರಿದವಳೆಂದು ಕೊಲೆ ಮಾಡಿರುವುದಾಗಿ ಪೋಷಕರು ಆರೋಪಿಸಿದ್ದಾರೆ.
ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರೋಣತ್ತರ ಪರೀಕ್ಷೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಯುವತಿಯ ಮೃತದೇಹ ರವಾನೆ ಮಾಡಲಾಗಿದೆ.