ಕಾಂಗ್ರೆಸ್ ಕರೆ ನೀಡಿದ್ದ ನಾಳೆಯ ಕೊಡಗು ಬಂದ್ ರದ್ದುಗೊಳಿಸಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಸರಕಾರದ ಭ್ರಷ್ಟಾಚಾರ ವಿರೋಧಿಸಿ, ಎರಡು ಗಂಟೆಗಳ ಕಾಲ ಸ್ವಯಂಪ್ರೇರಿತ ಕೊಡಗು ಬಂದ್ ಗಾಗಿ ಕರೆ ನೀಡಿದ್ದ ಕಾಂಗ್ರೆಸ್ ಪರೀಕ್ಷಾರ್ಥಿ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಗುರುವಾರ ನಡೆಯಬೇಕಿದ್ದ ಕೊಡಗು ಬಂದ್ ರದ್ದು ಮಾಡಲಾಗಿದೆ ಎಂದರು.ಕೆಪಿಸಿಸಿ ಸೂಚನೆಯಂತೆ ಬಂದ್ ರದ್ದುಗೊಳಿಸಿದ ಮಾಹಿತಿ ನೀಡಿದ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಬಂದ್ ನಡೆಯುವುದಿಲ್ಲ ಎಂದು ಸ್ಪಷ್ಟನೆ ಪಡಿಸಿದ್ದಾರೆ.