ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮದ ಉದ್ದಿಬಾಣೆ ಮಠದಲ್ಲಿ ಶ್ರದ್ದಾಭಕ್ತಿಯಿಂದ ಧರ್ಮ ದೈವಗಳ ನೇಮೋತ್ಸವವು ನಡೆಯಿತು.

ರಾತ್ರಿ ಬಂಡಾರ ತೆಗೆಯುವ ಮೂಲಕ ನೇಮೋತ್ಸವಕ್ಕೆ ಚಾಲನೆ ದೊರೆಯಿತು. ಬೆಳಗ್ಗೆ ಗಣಹೋಮ ಮತ್ತು ಸತ್ಯನಾರಾಯಣ ಪೂಜೆ ಬಳಿಕ ಕಲ್ಲುರ್ಟಿ ದೈವದ ನೇಮವು ದೊರೆಯಿತು.

ಬೆಳಗ್ಗಿನ ಜಾವದಲ್ಲಿ ಪಂಜುರ್ಲಿ ದೈವದ ನೇಮ, ಬಳಿಕ ಗುಳಿಗ ದೈವದ ಕೋಲ,ಜೋಡಿ ಕೊರಗಜ್ಜ ದೈವದ ನೇಮೋತ್ಸವ ನೆರವೇರಿತು.
ಭಂಡಾರ ಗರಡಿಯಿಂದ ಸ್ವಸ್ಥಾನಕ್ಕೆ ತೆಗೆದುಕೊಂಡು ಹೋಗುವ ಮೂಲಕ ನೇಮೋತ್ಸವಕ್ಕೆ ತೆರೆ ಕಂಡಿತು.