ಬಲಿಜ ಜನಾಂಗದ ಕ್ರೀಡಾಕೂಟ ಈ ಭಾರಿ ಮಡಿಕೇರಿ ತಾಲ್ಲೂಕಿನಲ್ಲಿ ನಡೆಸಲು ತೀರ್ಮಾನ ಮಾಡಲಾಗಿದೆ.ಕೊರೋನಾ ಮಹಾಮಾರಿ, ಕೊಡಗು ಜಲಪ್ರಳಯದಿಂದ ಸ್ಥಗಿತಗೊಂಡಿದ್ದ ಕ್ರೀಡೋತ್ಸವಕ್ಕೆ ಮತ್ತೆ ಚಾಲನೆ ದೊರೆಯಿತು. ಸುಮಾರು 3 ಸಾವಿರ ಕೊಡಗು ಬಲಿಜ ಜನಾಂಗದ ನಡುವೆ ವಿವಿಧ ಕ್ರೀಡಾ ಸ್ಪರ್ಧೆ ನಡೆಯಲಿದೆ.

ಕ್ರೀಡಾಕೂಟ ವಿವರ ಇಂತಿದೆ:
ಹಗ್ಗ ಜಗ್ಗಾಟ( ಪುರುಷರು ಮತ್ತು ಮಹಿಳೆಯರು),ಸಂಗೀತ ಕುರ್ಚಿ ಅಥವಾ ವಿಷದ ಕುರ್ಚಿ ಮಹಿಳೆಯರು, ಯುವತಿಯರಿಗೆ ಮುಕ್ತ ಅವಕಾಶ ಇರುತ್ತದೆ. ಪುರುಷರಿಗೆ ಭಾರದ ಗುಂಡು ಎಸೆತ, ಲೆಮೆನ್ ಸ್ಪೂನ್ (ಮಹಿಳೆಯರು,ಮಕ್ಕಳಿಗೆ), ಕಾಳು ಹೆಕ್ಕುವ ಸ್ಪರ್ಧೆ (ಮಕ್ಕಳಿಗೆ)100 ಮೀಟರ್, ಓಟ (ಮಕ್ಕಳಿಗೆ), ಅಂತಿಮವಾಗಿ ಕೊಡಗು ವಾಲಗತ್ತಾಟ್ ಸ್ಪರ್ಧೆ ಮತ್ತು ದಾಸರ ಕೀರ್ತನೆ ಹಾಡುಗಾರಿಕೆ ಇರಲಿದೆ. ಮಕ್ಕಳಿಗೆ ಕೈವಾರ ತಾತಯ್ಯ ಚಿತ್ರ ಬಿಡಿಸುವ ಸ್ಪರ್ಧೆ ಹಾಗು ಜೊತೆಗೆ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಸಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು.