ಕೊಡಗು ಜಿಲ್ಲೆಯ ಜಮ್ಮಾ ಬಾಣೆ ಭೂಮಿಗೆ ಸಂಬoಧಿಸಿದ ವಿಧೇಯಕವನ್ನು ಸದನದಲ್ಲಿ ಕಾನೂನು ಸಚಿವರಾದ ಹೆಚ್ ಕೆ ಪಾಟೀಲ್ ಅವರು ಮಂಡಿಸಿದರು.

ಈ ವಿಧೇಯಕ ಕುರಿತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ. ಎಸ್ ಪೊನ್ನಣ್ಣ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು, ಸ್ಪಷ್ಟಣೆ ನೀಡಿ, ಈ ವಿಧೇಯಕ ವಿಶೇಷವಾಗಿ ಕೊಡಗು ಜಿಲ್ಲೆಗೆ ಸಂಬOಧಸಿದ್ದಾಗಿದೆ. 1964ನೇ ಕರ್ನಾಟಕ ಕಂದಾಯ ಕಾನೂನಿನಲ್ಲಿ ಕೆಲವು ಅಂಶಗಳು ಕೊಡಗು ಜನರ ಸಮಸ್ಯೆಗೆ ಕಾರಣವಾಗಿದೆ. ಅತ್ಯಂತ ಜಟೀಲವಾದ ಸಮಸ್ಯೆಯಾಗಿರುವುದರಿಂದ ಇದನ್ನು ತಿದ್ದುಪಡಿ ಮಾಡಲು ಅವಶ್ಯಕವಾಗಿರುತ್ತದೆ.

ಆದುದರಿಂದ ವಿಧಾನಸಭೆಯ ಆಯ್ಕೆ ಸಮಿತಿ ರಚನೆ ಮಾಡಲು ವಿಧಾನಸಭೆಯಲ್ಲಿ ವಿನಂತಿಸಿದರು. ಈ ಬಗ್ಗೆ ವಿಧಾನಸಭೆಯಲ್ಲಿ “ವಿಧಾನಸಭೆ ಆಯ್ಕೆ ಸಮಿತಿ” ರಚನೆ ಮಾಡಲು ಒಪ್ಪಿಗೆ ನೀಡಲಾಯಿತು.