ಕಾಡಾನೆ ದಾಳಿ ತಡೆಯಲು ರಾಜ್ಯ ಸರಕಾರದ ಪರಿಹಾರ ಉಪಾಯ ಮಾಡಲಾಗುತ್ತಿದೆ.
ಕೊಡಗು ಮತ್ತು ಹಾಸನದಲ್ಲಿ ಕಾಡಾನೆ ವಿಹಾರ ಧಾಮ ಸ್ಥಾಪನೆ ಮಾಡುವ ಯೋಜನೆ ರೂಪಿಸಲಾಗುತ್ತಿದೆ.
2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆನೆ ಧಾಮ ನಿರ್ಮಿಸುವ ಉದ್ದೇಶ ಹೊಂದಿದೆ ಎಂದು ತಿಳಿದು ಬಂದಿದೆ. ಆನೆಗೆ ಅಗತ್ಯ ಆಹಾರ, ನೀರು ಬಿದಿರು ಹಲಸು ನೀಡುವ ಯೋಜನೆಗೆ ಚಿಂತನೆ ಮಾಡಲಾಗುತ್ತಿದೆ.
ಬೆಳಗಾವಿ ಅಧಿವೇಶನದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ಹಾಗು
5 ವರ್ಷದವರೆಗೆ ಪ್ರತೀ ತಿಂಗಳು 4 ಸಾವಿರ ಹಣ ನೀಡಿಕೆಗೆ ಯೋಜನೆ ರೂಪಿಸುವ ಇಂಗಿತವನ್ನು ಸಚಿವ ಈಶ್ವರ್ ಖಂಡ್ರೆ ಹೇಳಿಕೆ ಮೂಲಕ ವ್ಯಕ್ತಪಡಿಸಿದ್ದಾರೆ.