ಕುಶಾಲನಗರ ಪಟ್ಟಣ ಸಂಪೂರ್ಣ ಕೇಸರಿಮಯ ವಾಗಿದೆ, ನಾಳೆ ನಡೆಯಲಿರುವ ಹನುಮ ಜಯಂತಿಗೆ ಪಟ್ಟಣ್ಣದ ಇಕ್ಕೆಲ, ವೃತ್ತಗಳು ತುಂಬೆಲ್ಲಾ ಕೇಸರಿ ಬಂಟಿಂಗ್ಸ್ ಬ್ಯಾನರ್ ಗಳಿಂದ ಕಂಗೊಳಿಸುತ್ತಿದೆ. 39ನೇ ವರ್ಷದ ಕುಶಾಲನಗರ ಹನುಮ ಜಯಂತಿ ಈ ಭಾರಿ ದಸರಾ ಮಾದರಿಯಲ್ಲಿ ಸಾಜ್ಜಾಗಿದೆ. 

ಪಟ್ಟಣಕ್ಕೆ ಪ್ರವೇಶ ಮಾಡುವ ಮೈಸೂರ್ , ಹಾಸನ, ಮಡಿಕೇರಿ ಭಾಗದಲ್ಲಿ ಬೃಹತ್ ಗಾತ್ರದ ಕಾಮಾನುಗಳು ಹನುಮ ಭಕ್ತರನ್ನು ಸ್ವಾಗತಹಿಸುತ್ತಿದೆ.

ಕುಶಾಲನಗರ ಸೇರಿದಂತೆ ಸುತ್ತಮುತ್ತಲಿನ ಸಮಿತಿಗಳು ಈ ಭಾರಿಯ ಹನುಮ ಜಯಂತಿಗೆ ಕೈ ಜೋಡಿಸಿದೆ, ಅಕ್ಕಪಕ್ಕದ ಗ್ರಾಮಗಳಿಂದಆಕರ್ಷಕ ಮಂಟಪಗಳು ಆಗಮಿಸಲು ಸಾಜ್ಜಾಗಿವೆ.

ಒಂದೂವರೆ ಕೋಟಿ ಬಜೆಟ್ ಉತ್ಸವ

ಈ ಬಾರಿಯ ಹನುಮನ ಜಯಂತಿಗೆ ಒಂದೂವರೆ ಕೋಟಿ ಯಷ್ಟು ಖರ್ಚು ಆಗಬಹುದೆಂದು ಅಂದಾಜಿಸಲಾಗಿದೆ.ಪ್ರತೀ ಸಮಿತಿಗಳಿಂದ ಆಕರ್ಷಕ ಮಂಟಪ,ಸುತ್ತಮುತ್ತಲಿನ ಗ್ರಾಮಗಳ್ಳಲ್ಲಿ ಬ್ಯಾನೆರ್ ಬಂಟಿಂಗ್ಸ್ ಸಿಂಗಾರ, ಭಕ್ತರಿಗೆ ಅನ್ನಧಾನ,ಲೈಟಿಂಗ್ಸ್ ಹೀಗೆ 25 ಲಕ್ಷದವರೆಗೆ ಖರ್ಚು ಅಂದಾಜಿಸಲಾಗಿದೆ.

ಹನುಮನ ಕಥವಸ್ತು ಆಧಾರಿತ ಮಂಟಪ ಮಡಿಕೇರಿ, ಗೋಣಿಕೊಪ್ಪ ದಸರಾ ಮೀರಿಸುವಂತೆ ಸಾಜ್ಜಾಗಿದೆ, 30 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು ಮೆರವಣಿಗೆ ಸಾಗುವ ಮಾರ್ಗ ದಲ್ಲಿ ಸೂಕ್ತ ಬಂದೋಬಸ್ತ್ ಪೊಲೀಸ್ ಇಲಾಖೆ ಕಲ್ಪಿಸಿದೆ.

ಸೆಲೆಬ್ರಿಟಿ ಮೆರುಗು

ಪ್ರತಿಯೊಂದು ಸಮಿತಿಗಳು ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡಲು ಸಿನಿಮಾ ತಾರೆಯರು ಸೇರಿದಂತೆ, ರಾಜಕೀಯ ಪ್ರಮುಖರು ಆಗಮಿಸಲಿದ್ದಾರೆ ರೋರಿಂಗ್ ಸ್ಟಾರ್ ಮುರಳಿ ಸೇರಿದಂತೆ ಚಿತ್ರರಂಗದ ಕಲಾವಿದರು ಮುಳ್ಳುಸೋಗೆ ಸಮಿತಿಗೆ ಆಗಮಿಸಲಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಮಾಜಿ ಸಂಸದ ಪ್ರತಾಪ್ ಸಿಂಹ, ಸಿ.ಟಿ ರವಿ, ಎ. ಮಂಜು, ಅಪ್ಪಚ್ಚು ರಂಜನ್ ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿದೆ.

ಒಟ್ಟಿನಲ್ಲಿ ಇತ್ತೀಚಿಗೆ ನಡೆದ ಕುಶಾಲನಗರ ಮಹಾಗಣಪತಿ ರಾಥೋತ್ಸವ ಬಳಿಕ ಮತ್ತೊಂದು ಸಂಭ್ರಮಕ್ಕೆ ಕುಶಾಲನಗರ ಪಟ್ಟಣ್ಣ ಅಂಜನೀಪುತ್ರನ ಭಕ್ತರಿಗೆ ಆಹ್ವಾನ ನೀಡಿದೆ.

ಗಿರಿಧರ್ ಕೊಂಪುಳಿರ